ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಸದ್ಯ 50 ದಿನಗಳನ್ನ ಪೂರೈಸಿದ ಸಂಭ್ರಮದಲ್ಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಿದ್ದ 'ತಾರಕ್' ಈಗ ದೇಶದ ಹೊರಗೆ ಕಾಲಿಡುತ್ತಿದೆ.
ಸ್ವದೇಶದಲ್ಲಿ ಯಶಸ್ಸು ಕಂಡ 'ತಾರಕ್' ಈಗ ಗಡಿಯಾಚೆ ಅಬ್ಬರಿಸಲು ಸಜ್ಜಾಗುತ್ತಿದ್ದು, ಅಮೇರಿಕಾ, ಕೆನಡಾ, ಸಿಂಗಾಪೂರ್ ದೇಶಗಳಲ್ಲಿ ಡಿ-ಬಾಸ್ ಸಿನಿಮಾ ತೆರೆ ಕಾಣುತ್ತಿದೆ. ಹಾಗಿದ್ರೆ, 'ತಾರಕ್' ಸಿನಿಮಾ ಯಾವ ದೇಶದಲ್ಲಿ ಯಾವಾಗ ಬಿಡುಗಡೆಯಾಗುತ್ತಿದೆ? ಎಂಬುದನ್ನ ತಿಳಿಯಲು ಮುಂದೆ ಓದಿ.ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ 'ತಾರಕ್' ಹಾಪ್ ಸೆಂಚುರಿ ಬಾರಿಸುತ್ತಿದೆ. ದಸರಾ ಹಬ್ಬದ ಪ್ರಯುಕ್ತ ಸೆಪ್ಟಂಬರ್ 29 ರಂದು ಬಿಡುಗಡೆಯಾಗಿದ್ದ 'ತಾರಕ್' ನವೆಂಬರ್ 17ಕ್ಕೆ ಅರ್ಧ ಶತಕದ ಸಂಭ್ರಮವನ್ನ ಆಚರಿಸುತ್ತಿದೆ.ನವೆಂಬರ್ 17 ರಿಂದ ಅಮೇರಿಕಾ ಹಾಗೂ ಕೆನಡಾದಲ್ಲಿ ದರ್ಶನ್ ಅಭಿನಯದ 'ತಾರಕ್' ಸಿನಿಮಾ ತೆರೆ ಕಾಣುತ್ತಿದೆ. ಕಸ್ತೂರಿ ಮೀಡಿಯಾದ 'ತಾರಕ್' ಚಿತ್ರವನ್ನ ವಿತರಣೆ ಮಾಡುತ್ತಿದ್ದು, ಈ ವಾರಾಂತ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ಸಿನಿಮಾ ನೋಡುವ ಅವಕಾಶ ಅಲ್ಲಿನ ಕನ್ನಡಿಗರಿಗೆ ಸಿಗಲಿದೆ.ಅಮೇರಿಕಾದಲ್ಲಿ 17 ತಾರೀಖು ರಿಲೀಸ್ ಆಗುತ್ತಿದ್ರೆ, ಸಿಂಗಾಪೂರ್ ನಲ್ಲಿ ನವೆಂಬರ್ 19 ರಂದು ದರ್ಶನ್ ಅವರ 'ತಾರಕ್' ಸಿನಿಮಾ ಬಿಡುಗಡೆಯಾಗುತ್ತಿದೆ.
Challenging star Darshan's movie 'Tarak' is currently celebrating 50 days.tharak was also released in other countries like america,canada, singapur,, watch this video.